•  
  •  
  •  
  •  
Index   ವಚನ - 1657    Search  
 
ದೇಹವೆಂಬುದು ಅವಿದ್ಯೆ ಎಂಬುವರು; ಅದೆಂತಯ್ಯಾ? ದೇಹ ತಾನಿಲ್ಲದಿರೆ ಆಶ್ರಯಿಸುವ ಪರಿ ಎಂತಯ್ಯಾ? ಅರಿದಡೆ ಆಶ್ರಯಿಸ; ಮರೆದಡೆ ಆಶ್ರಯಿಸುವ. `ಅಜ್ಞಾನಾದಧಶ್ಚಲತಿ' ಎಂಬುದ ಅರಿದೆನಯ್ಯಾ, ದೇಹವದು ಜಡಸಾಕ್ಷಿ! ಅಜಡವೆಂಬ ಭಾವ ವಚನದಲ್ಲಲ್ಲದೆ ಅನುಭಾವದಲ್ಲಿಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Dēhavembudu avidye embavaru; adēntayyā? Dēha tānilladire āśrayisuva pari entayyā? Aridaḍe āśraya; maredaḍe āśrayisuva. `Ajñānādadhaścalati' embuda aridenayyā, dēhavadu jaḍasākṣi! Ajaḍavemba bhāva vacanadallallade anubhāvadalla nōḍā, kapilasid'dhamallikārjunā.