ವಚನ - 1660     
 
ಸರ್ವಂ ಶಿವಮಯಂ ಜಗತ್ ಎಂದ ಬಳಿಕ, ತನ್ನ ದೇಹ ನಿರ್ಮಲಕ್ಕಿಕ್ಕಬಹುದೆ ಅಯ್ಯಾ? `ಸರ್ವಂ ಖಲ್ವಿದಂ ಬ್ರಹ್ಮ' ಎಂದ ಬಳಿಕ, ಕರಣಗಳಾವರಣಕ್ಕೆ ಸಿಲ್ಕಿಸಬಹುದೆ, ಕಪಿಲಸಿದ್ಧಮಲ್ಲಿಕಾರ್ಜುನಾ?