Index   ವಚನ - 1665    Search  
 
ಅರಿಷಡ್ವರ್ಗಂಗಳಳಿದವ ಶರಣನೆಂಬರು; ಅದೆಂತಯ್ಯಾ? ಕಾಮವದು ಲಿಂಗಾರ್ಚನೆಯಲ್ಲಿ; ಕ್ರೋಧವದು ಷಣ್ಮತನಾಶದಲ್ಲಿ; ಲೋಭವದು ಸಮ್ಯಗ್‍ಜ್ಞಾನದಲ್ಲಿ; ಮೋಹವದು ಮುಕ್ತ್ಯಂಗನೆಯಲ್ಲಿ; ಮದವದು [ದ] ಮನದಲ್ಲಿ; ಮತ್ಸರವದು ಶಮನದಲ್ಲಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.