ಇಕ್ಷುವಿನ ಮನದಲ್ಲಿಪ್ಪ ಕುಟಿಲ
ಕೇಸರಿಯ ರೂಪಕ್ಕಂಜುವರಲ್ಲದೆ,
ರಾಗ ರಂಜನೆಗಂಜುವರೇನಯ್ಯಾ?
ಸ್ಥಲದಲ್ಲಿಪ್ಪ ವೇಷಧಾರಿಯ ರೂಪಕ್ಕಂಜುವರಲ್ಲದೆ,
ವಿಷಯಗುಣ-ರಂಜನೆಗಂಜುವರೇನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ,
ನಿಮ್ಮ ಶರಣರೆಂಬ ಮದದಾನೆಗಳು?
Art
Manuscript
Music
Courtesy:
Transliteration
Ikṣuvina manadallippa kuṭila
kēsariya rūpakkan̄juvarallade,
rāga ran̄janegan̄juvarēnayyā?
Sthaladallippa vēṣadhāriya rūpakkan̄juvarallade,
viṣayaguṇa-ran̄janegan̄juvarēnayyā,
kapilasid'dhamallikārjunā,
nim'ma śaraṇaremba madadānegaḷu?