Index   ವಚನ - 1675    Search  
 
ಚತುರ್ವರ್ಣಿಯಾದಡೇನು, ಚತುರ್ವರ್ಣಾತೀತನೆ ವೀರಶೈವ ನೋಡಾ. ಚತುರ್ವೇದಿಯಾದಡೇನು, [ಚರಮ] ದೇಹವಳಿಯದವನೆ ಚಾಂಡಾಲ ನೋಡಾ. ಚತುರಂಗಬಲಯುಕ್ತನಾದಡೇನು, ಚತುರಗುಣವಿಲ್ಲದಿದ್ದಡೆ ದೇಶವನಾಳ್ವ ಪರಿಯ ನೋಡಾ. [ಚರಮ] ದೇಹಿಯಾದಡೇನು, ಗಜಚರ್ಮಧರ ಕಪಿಲಸಿದ್ಧಮಲ್ಲಿಕಾರ್ಜುನ ಪ್ರಸನ್ನವಾಗದನ್ನಕ್ಕ ಬಾಳುವೆ ನೋಡಾ.