ವಚನ - 1678     
 
ಹೇಳಿದ ಬೋಧೆ ಶಿಲಾಲಿಪಿಯಂತಾದಡೆ, ಶಿಲಾಸದೃಶ ನೋಡಾ ಭವಕ್ಕೆ. ಹೇಳಿದ ಬೋಧೆ ಜಲಲಿಪಿಯಾದಡೆ, ಜಲಸದೃಶ ನೋಡಾ ಭವಕ್ಕೆ. ಹೇಳಿದ ಬೋಧೆ ಗಟ್ಟಿಗೊಂಡಡೆ, ಆಳುವುದೆತ್ತ ನಿನ್ನ ಮಾಯಾಜಾಲವ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.