Index   ವಚನ - 1680    Search  
 
ಲಿಂಗವ ಪೂಜಿಸಿದ ಫಲ ನೀಲಲೋಚನೆಗಾಯಿತ್ತು. ಜಂಗಮವ ಪೂಜಿಸಿದ ಫಲ ಬಸವಣ್ಣಂಗಾಯಿತ್ತು. ಮಂತ್ರವ ಪೂಜಿಸಿದ ಫಲ ಅಜಗಣ್ಣಂಗಾಯಿತ್ತು. ಯೋಗದ ಪೂಜಿಸಿದ ಫಲ ಸಿದ್ಧರಾಮಂಗಾಯಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.