ತರ್ಕಿಸಿದಲ್ಲಿ ವಾದಿಸಿ ಶಿಖಾಮುದ್ರೆ
ಸಾಧಿಸುವವರೊಂದು ಕೋಟಿ.
ವೇದಾಂತದಲ್ಲಿ ವಾದಿಸಿ ಶಿಖಾಮುದ್ರೆ
ಸಾಧಿಸುವವರೊಂದು ಕೋಟಿ.
ಶರಣನ ವಾದಿಸಿ ಶಿಖಾಮುದ್ರೆಯ ಸಾಧಿಸುವದದು
ಶರಣನ ಬಿಟ್ಟು ಶರ ತಾಗಿದವರಲ್ಲೋರ್ವರಿಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Tarkisidalli vādisi śikhāmudre
sādhisuvavarondu kōṭi.
Vēdāntadalli vādisi śikhāmudre
sādhisuvavarondu kōṭi.
Śaraṇana vādisi śikhāmudreya sādhisuvadu
śaraṇana biṭṭu śara tāgidavarallōrvarilla nōḍā,
kapilasid'dhamallikārjunā.