ವಚನ - 1721     
 
ಮಾಡಬಾರದು ಮಾಡಬಾರದು ಪರಸ್ತ್ರೀಸಂಗವ. ನೋಡಬಾರದು ನೋಡಬಾರದು ದೃಷ್ಟಿಯನ್ನೆತ್ತಿ ಪರದ್ರವ್ಯವ. ಕೂಡಬಾರದು ಕೂಡಬಾರದು ಕುಲವಿಲ್ಲದವನಲ್ಲಿ ಆಡಬಾರದು ಆಡಬಾರದು ದುರ್ವಿಷಯಗಳಲ್ಲಿ. ಮಾಡಿ ನೋಡಿ ಕೂಡಿ ಆಡಿದಡೆ ಈಡು ನೋಡಾ, ಯಮ ಮಾಡಿದ ಪುಳುಗೊಂಡಕ್ಕೆ, ಎಲೆ ಬಿಲ್ಲೇಶಾ, ಕಪಿಲಸಿದ್ಧಮಲ್ಲಿಕಾರ್ಜುನಾರ್ಯನ ಸಾನ್ನಿಧ್ಯದಲ್ಲಿ ಕೇದಾರ ಗುರು ಸಾಕ್ಷಿಯಾಗಿ.