•  
  •  
  •  
  •  
Index   ವಚನ - 1734    Search  
 
ತಮ್ಮಿಚ್ಛೆಗೆ ಬಂದ ಪದಾರ್ಥ ಲಿಂಗದಿಚ್ಛೆ ಎಂಬರು; ತಮ್ಮಿಚ್ಛೆಗೆ ಬರದ ಪದಾರ್ಥ ಲಿಂಗದಿಚ್ಚೆ ಇಲ್ಲವೆಂಬರು. ಹೋದ ವಾಕ್ಕು ಶಿವಾಜ್ಞೆ ಎಂಬರು. ಇದ್ದ ಮಾತು ತನ್ನಾಜ್ಞೆ ಎಂಬರು, ಅದೆಂತಯ್ಯಾ? ಇಚ್ಛೆಗೆ ಒಳಗಾಗುವನಲ್ಲಯ್ಯಾ ಲಿಂಗವು. `ಶಿವೋ ದಾತಾ ಶಿವೋ ಭೋಕ್ತಾ' ಎಂಬುದ ತಿಳಿದು, ಲಿಂಗಮುಖದಿಂದ ಬಂದ ಪದಾರ್ಥವ ಕೈಕೊಂಬಡೆ, ಅಚ್ಚ ಲಿಂಗೈಕ್ಯನೆಂಬೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Tam'micchege banda padārtha liṅgadicche embaru; tam'micchege barada padārtha liṅgadicce illavembaru. Hōda vākku śivāje embaru. Idda mātu tannāje embaru, adēntayyā? Icchege oḷagāguvanallayya liṅgavu. `Śivō dātā śivō bhōktā' embuda tiḷidu, liṅgamukhadinda banda padārthava kaikombaḍe, acca liṅgaikyanembe nōḍā, kapilasid'dhamallikārjunā.