ವಚನ - 1739     
 
ಸಕಲ ಪರಿಪೂರ್ಣನಾದುದರಿಂದ ಬಾಲಕನಂತೆ ತೋರುವನಯ್ಯಾ. ವಿಧಿ-ನಿಷೇಧಂಗಳಿಲ್ಲದರಿಂದ ಉನ್ಮತ್ತನಂತೆ ತೋರುವನಯ್ಯಾ. ಜನರಂಜನ ಲಾಂಛನವಿಲ್ಲದರಿಂದ ಪೈಶಾಚಿಯಂತೆ ತೋರುವನಯ್ಯಾ. ನಿಶ್ಶಬ್ದಬ್ರಹ್ಮ ವೇದ್ಯನಾದುದರಿಂದ ಮೂಕನಂತೆ ತೋರುವನಯ್ಯಾ. ಸಕಲಾಗಮದ ಮೂರ್ತಿ ತಾನಾದುದರಿಂದ ವಿದ್ವಾಂಸರೊಳ್ ಬೆರಸುವ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಮಹಾಮೂರ್ತಿ ಜಂಗಮನು.