•  
  •  
  •  
  •  
Index   ವಚನ - 1751    Search  
 
ಆಗುವ ಭೋಗಂಗಳಿಗೆ ಮೈಗೊಟ್ಟುದು ಎಂದಡೆ, ಮೈಗೊಡದು ನೋಡಾ, ಲಿಂಗಾರ್ಚನಾಫಲ. ಆಗಬಾರದ ಕಾರ್ಯ ಮಾಡೆನೆಂದಡೆ, ಮೈಗೊಡುವುದು ನೋಡಾ, ಲಿಂಗಾರ್ಚನಾಫಲ. ದೃಢವಿರಬೇಕು ಲಿಂಗಾರ್ಚನೆಯಲ್ಲಿ! ದೃಢವಿಲ್ಲದವನ ಹೆಡಗುಡಿಯ ಕಟ್ಟಿ ಎಡಹಿಬಿಡುವ ಭವದಡಿಗೆ, ಎಮ್ಮ ಮೃಡಮೂರ್ತಿ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು.
Transliteration Āguva bhōgaṅgaḷige maigoṭṭudu endaḍe, maigoḍadu nōḍā, liṅgārcanāphala. Āgabārada kārya māḍenendaḍe, maigoḍuvudu nōḍā, liṅgārcanāphala. Dr̥ḍhavāgirabēku liṅgārcaneyalli! Dr̥ḍhavilladavana heḍaguḍiya kaṭṭi eḍahibiḍuva bhavadaḍige, em'mā mr̥ḍamūrti kapilasid'dhamallikārjunaliṅgavu.