ವಚನ - 1760     
 
ಶಿವಾಂಶಿಕಭಕ್ತನ ಸೊಮ್ಮು ಶಿವಜಂಗಮರಿಗೆ ಸಲ್ಲುವುದಲ್ಲದೆ, ಶಿವೆ ಬಸವೆಯರೆಂಬ ವಾರಾಂಗನೆಯರಿಗೆ ಸಲ್ಲುವುದೆ, ಅಯ್ಯಾ? ಡಾಂಭಿಕ ಭಕ್ತನ ಸೊಮ್ಮು ಡಾಂಭಿಕಯ್ಯಗಳಿಗೆ ಸಲ್ಲುವುದಲ್ಲದೆ. ಡಂಭವಿರಹಿತಂಗೆ ಸಲ್ಲುವುದೆ, ಅಯ್ಯಾ? ಎಮ್ಮ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಷಟ್‍ಸ್ಥಲಬ್ರಹ್ಮಿ ಚೆನ್ನಬಸವನ ಜಿಹ್ವಾಶೇಷದ ಸೊಮ್ಮು ಎನಗೆ ಸಲ್ಲುವುದಲ್ಲದೆ, ಜಗದ ಭಂಡಯ್ಯಗಳಿಗೆ ಸಲ್ಲುವುದೇನಯ್ಯಾ?