ಭಕ್ತನಾದ ಬಳಿಕ ವಿರಕ್ತಿಯ ನೋಡಿ ಆಚರಿಸುವುದಲ್ಲದೆ,
ಭಕ್ತಿ ಲಕ್ಷ್ಯಕ್ಕೆ ಮೈಗೊಡುವುದೆಂತಯ್ಯಾ?
ಭಕ್ತನಾದಡೆ ವಸ್ತ್ರಾನ್ನಕ್ಕೆ ಭಕ್ತನಲ್ಲದೆ,
ಸಾಮರಸ್ಯಕ್ಕೆ ಭಕ್ತನೆ ಅಯ್ಯಾ?
``ಭಕ್ತಸಂಪನ್ನಭಕ್ತೋಪಿ ದೃಷ್ಟ್ವಾ ಗುಣಗಣಾನಿ ವೈ|
ಸ್ವೀಕಾರಯೇಜ್ಜಂಗಮಸ್ಯ ಪಾದೋದಕಮಹರ್ನಿಶಂ||"
ಎಂಬ ವಾಕ್ಯವದು ಅಬದ್ಧವೇನಯ್ಯಾ?
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhaktanāda baḷika viraktiya nōḍi ācarisuvudallade,
bhakti lakṣyakke maigoḍuvudentayyā?
Bhaktanādaḍe vastrānnakke bhaktanallade,
sāmarasyakke bhaktane ayyā?
``Bhaktasampannabhaktōpi dr̥ṣṭvā guṇagaṇāni vai|
svīkārayējjaṅgamasya pādōdakamaharniśaṁ||
emba vākyavadu abad'dhavēnayyā?
Kapilasid'dhamallikārjunā.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ