•  
  •  
  •  
  •  
Index   ವಚನ - 1759    Search  
 
ಆಕಾಶದಲ್ಲಿಯ ತಾರೆಗಳು ಕಾಣಬಾರದೆಂಬ ಯೋಚನೆಯುಳ್ಳಡೆ ಸೂರ್ಯೋದಯಕ್ಕಯ್ಯಾ. ಆಕಾಶದಲ್ಲಿಯ ತಾರೆಗಳು ಕಾಣಬೇಕೆಂಬ ಯೋಚನೆಯುಳ್ಳಡೆ ಸೂರ್ಯಾಸ್ತಮಾನಕ್ಕಯ್ಯಾ! ಕಾಣಬಾರದು ಕಾಣಬಾರದು, ಜ್ಞಾನದಲ್ಲಿ ಆನಂದ ಅನಾನಂದವ. ಕಾಣಬಹುದು ಕಾಣಬಹುದು; ಅಜ್ಞಾನದಲ್ಲಿ ಸುಖದುಃಖೋಭಯದ್ವಂದ್ವವ. ಭೋ ಭೋ! ಕಪಿಲಸಿದ್ಧಮಲ್ಲಿಕಾರ್ಜುನ ಭೋ!
Transliteration Ākāśadalliya tāregaḷu kāṇabārademba yōcaneyuḷḷaḍe sūryōdayakkayya. Ākāśadalliya tāregaḷu kāṇabēkemba yōcaneyuḷḷaḍe sūryāstamānakkayya! Kāṇabāradu kāṇabāradu, jñānadalli ānanda ānandava. Kaṇḍubaruva; jñānadalli sukhaduḥkhōbhayadvandvava। bhō bhō! Kapilasid'dhamallikārjuna bhō!