Index   ವಚನ - 1761    Search  
 
ಭಕ್ತನಾದ ಬಳಿಕ ವಿರಕ್ತಿಯ ನೋಡಿ ಆಚರಿಸುವುದಲ್ಲದೆ, ಭಕ್ತಿ ಲಕ್ಷ್ಯಕ್ಕೆ ಮೈಗೊಡುವುದೆಂತಯ್ಯಾ? ಭಕ್ತನಾದಡೆ ವಸ್ತ್ರಾನ್ನಕ್ಕೆ ಭಕ್ತನಲ್ಲದೆ, ಸಾಮರಸ್ಯಕ್ಕೆ ಭಕ್ತನೆ ಅಯ್ಯಾ? ``ಭಕ್ತಸಂಪನ್ನಭಕ್ತೋಪಿ ದೃಷ್ಟ್ವಾ ಗುಣಗಣಾನಿ ವೈ| ಸ್ವೀಕಾರಯೇಜ್ಜಂಗಮಸ್ಯ ಪಾದೋದಕಮಹರ್ನಿಶಂ||" ಎಂಬ ವಾಕ್ಯವದು ಅಬದ್ಧವೇನಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.