ಶಿವಾಂಶಿಕಭಕ್ತನ ಸೊಮ್ಮು ಶಿವಜಂಗಮರಿಗೆ ಸಲ್ಲುವುದಲ್ಲದೆ,
ಶಿವೆ ಬಸವೆಯರೆಂಬ ವಾರಾಂಗನೆಯರಿಗೆ ಸಲ್ಲುವುದೆ, ಅಯ್ಯಾ?
ಡಾಂಭಿಕ ಭಕ್ತನ ಸೊಮ್ಮು ಡಾಂಭಿಕಯ್ಯಗಳಿಗೆ ಸಲ್ಲುವುದಲ್ಲದೆ.
ಡಂಭವಿರಹಿತಂಗೆ ಸಲ್ಲುವುದೆ, ಅಯ್ಯಾ?
ಎಮ್ಮ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಷಟ್‍ಸ್ಥಲಬ್ರಹ್ಮಿ
ಚೆನ್ನಬಸವನ ಜಿಹ್ವಾಶೇಷದ ಸೊಮ್ಮು ಎನಗೆ ಸಲ್ಲುವುದಲ್ಲದೆ,
ಜಗದ ಭಂಡಯ್ಯಗಳಿಗೆ ಸಲ್ಲುವುದೇನಯ್ಯಾ?
Transliteration Śivānśikabhaktana som'mu śivajaṅgamarige salluvudallade,
śive basaveyaremba vārāṅganeyarige salluvude, ayyā?
Ḍāmbhika bhaktana som'mu ḍāmbhikayyagaḷige salluvudallade.
Ḍambhavirahitaṅge salluvude, ayyā?
Em'mā kapilasid'dhamallikārjunanemba ṣaṭsthalabrahmi
cennabasavana jihvāśēṣada som'mu enage salluvudallade,
jagada bhaṇḍayyagaḷige salluvudēnayyā?