Index   ವಚನ - 1787    Search  
 
ಭಕ್ತನಾಗಿ ಭಕ್ತಿಯಿಲ್ಲದವ ಶಿವದ್ರೋಹಿ ನೋಡಾ, ಮನವೆ. ``ಯೋ ಭಕ್ತೋ ಭಕ್ತಿಮಾನ್ ಲೋಕೇ ಭೇದಂ ಮೋಹಾತ್ಕರೋತಿ ಹಿ| ಶಿವದ್ರೋಹೀ ಸ ವಿಜ್ಞೇಯಸ್ಸರ್ವಕರ್ಮಬಹಿಷ್ಕೃತಃ||'' ಎಂಬ ವಾಕ್ಯ ಪಾಲಿಸಿದೆ ನೋಡಾ, ಮನವೆ. ಎನ್ನ ಗುರು ಚೆನ್ನಬಸವ ಕಪಿಲಸಿದ್ಧಮಲ್ಲಿಕಾರ್ಜುನನಿಂದೆ, ಮನವೆ.