ವಚನ - 1790     
 
ಕರಡಿಗೆಯೊಳೊಬ್ಬ ಕುರುಡ ಮೂರುತಿ ತೋರುತ್ತಾನೆ. ಒಡನೊಡನೆ ನಡೆದಡೆ ಮೈಯೆಲ್ಲಾ ಚಕ್ಷುವಾಗಿ ತೋರುತ್ತಾನೆ. ನಡೆಯದಿರ್ದಡೆ ಕಪಿಲಸಿದ್ಧಮಲ್ಲಿಕಾರ್ಜುನನು ಕುರುಡ, ಇವನೂ ಕುರುಡ ನೋಡಾ, ಕೇದಾರ ಗುರುದೇವಾ.