Index   ವಚನ - 1825    Search  
 
ಮಾಡಿದ ಪೂಜೆಯದು ಮಹಾದೇವಂಗಲ್ಲದೆ, ಅನ್ಯ ದೇವತವೆಂಬುದು ಹೊಲ್ಲ ನೋಡಾ. ಬೇಡುವ ಕಾಟವದು ದಾನಶೂರಂಗಲ್ಲದೆ ಅನ್ಯ ಲೋಭಿಗದು ಹೊಲ್ಲ ನೋಡಾ. ನೋಡುವ ನೋಟವದು [ತನ್ನ ಸ್ತ್ರೀಯಲ್ಲಲ್ಲದೆ ಪರಸ್ತ್ರಿಯಲ್ಲಿ ಹೊಲ್ಲ] ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.