ವಚನ - 1827     
 
ಎಲ್ಲರೂ ಜಪಿಸುವ ಜಪವ ಜಪಿಸಲಾರೆನಯ್ಯಾ. ಕ್ಷಣಕ್ಕೊಮ್ಮೆ `ನಮಃ ಶಿವಾಯ' ಎಂಬೆ; ಕ್ಷಣಕ್ಕೊಮ್ಮೆ `ನಮಃ ಶಿವಾಯ' ಎಂಬೆ. ಕ್ಷಣ ಕ್ಷಣಕ್ಕೊಮ್ಮೆ ಇದೆ ಮಂತ್ರ ಘನವೆಂದುಸುರುವೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನದೇವಾ.