ಭಕ್ತನಾದ ಬಳಿಕ ಭಕ್ತಿವಿಡಿದಾಚರಿಸುವುದೆಂತಯ್ಯಾ?
ಭಕ್ತ ತಾನಾದ ಬಳಿಕ ಭಕ್ತಿಯ ಹೊಲಬನರಿಯಬೇಕು.
ಭಕ್ತ ತಾನಾದ ಬಳಿಕ ಜ್ಞಾನಕ್ರಿಯಾವಿವರವ ವಿಚಾರಿಸಿ, ನೋಡಬೇಕು.
ಭಕ್ತ ತಾನಾದ ಬಳಿಕ ಅರುಹಿನ ಕುರುಹುವಿಡಿದಾಚರಿಸಬೇಕು.
ಭಕ್ತ ತಾನಾದ ಬಳಿಕ ತಾಪತ್ರಯಕ್ಕೊಳಗಾಗದೆ,
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಐಕ್ಯ ಹೊಂದಲೇಬೇಕು.
Art
Manuscript
Music
Courtesy:
Transliteration
Bhaktanāda baḷika bhaktiviḍidācarisuvudentayyā?
Bhakta tānāda baḷika bhaktiya holabanariyabēku.
Bhakta tānāda baḷika jñānakriyāvivarava vicārisi, nōḍabēku.
Bhakta tānāda baḷika aruhina kuruhuviḍidācarisabēku.
Bhakta tānāda baḷika tāpatrayakkoḷagāgade,
kapilasid'dhamallikārjunanalli aikya hondalēbēku.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ