•  
  •  
  •  
  •  
Index   ವಚನ - 1831    Search  
 
ಆವನಾದಡೇನು, ಭಾವದಲ್ಲಿ ಪ್ರೀತನಲ್ಲದೆ ನಡೆ ನುಡಿ ಗಡಣದಲ್ಲಿ ಪ್ರೀತಿಯುಂಟೆ ದೇವಾ. ಅರಸನಾದಡೇನು, ಆಳುವಲ್ಲಿ ಅಧಿಕಾರಿಯಲ್ಲದೆ ಅಳಿವಲ್ಲಿ ಅಧಿಕಾರಿಯುಂಟೆ ದೇವಾ? ಭಕ್ತನಾದಡೇನು, ಭಕ್ತನಲ್ಲಿ ಸಲುಗೆಯಲ್ಲದೆ ಮಹೇಶನಲ್ಲಿ ಸಲುಗೆಯುಂಟೇನಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನದೇವಾ.
Transliteration Āvanādaḍēnu, bhāvadalli prītanallade naḍe nuḍi gaḍaṇadalli prītiyuṇṭe dēvā. Arasanādaḍēnu, āḷuvalli adhikāriyillade aḷivalli adhikāriyuṇṭe dēvā? Bhaktanādanu, bhaktanalli salugeyallade mahēśanalli salugeyuṇṭēnayyā? Kapilasid'dhamallikārjunadēvā.