ಆರಿಗೆ ನಿಲುಕದ ಬ್ರಹ್ಮವ,
ನೀನಾರಿಸಿ ನೋಡಿದಡೆ ಹುರುಳಿಲ್ಲ ನೋಡಾ, ಮರುಳು ಮಾನವಾ.
ಆರಿಗೆಂಬಲ್ಲಿ ಜೀವಭಾವ ಆರಿಸಿದೆನೆಂಬಲ್ಲಿ ಅಹಂಭಾವ.
ಆರಿಗೆಂಬುದು, ಆರಿಸಿದೆನೆಂಬುದು ಅಳಿದಡೆ,
ಅದೇ ಪರಬ್ರಹ್ಮ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ārige nilukada brahmava,
nīnārisi nōḍidaḍe huruḷilla nōḍā, maruḷu mānavā.
Ārigemballi jīvabhāva ārisidenemballi ahambhāva.
Ārigembudu, ārisidenembudu aḷidaḍe,
adē parabrahma nōḍā, kapilasid'dhamallikārjunā.