ಅಯ್ಯಗಳು ರುದ್ರಾಕ್ಷಿಯ ಕೊಟ್ಟಲ್ಲಿ ಫಲವಲ್ಲದೆ,
ಸುಮ್ಮನೆ ಧರಿಸಿದಲ್ಲಿ ಫಲವಿಲ್ಲ ನೋಡಾ,
ಭಕ್ತನು ಪದಾರ್ಥ ನೀಡಿದಲ್ಲಿ ಫಲವಲ್ಲದೆ,
ಬೇಡಿ ರುಚಿಸಿದಲ್ಲಿ ಫಲವಿಲ್ಲ ನೋಡಾ.
ನಿನ್ನರಿವ ನಾನರಿತಲ್ಲಿ ಫಲವಲ್ಲದೆ,
ಅರುಹಿಸಿದಲ್ಲಿ ಫಲವಿಲ್ಲ.
ಅಹುದೆಂಬುದು ನೀತಿ, ಬಲ್ಲೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Ayyagaḷu rudrākṣiya koṭṭalli phalavallade,
sum'mane dharisidare phalavilla nōḍā,
bhaktanu padārtha nīḍida phalavallade,
bēḍi rucisidalli phalavilla nōḍā.
Ninnariva nānaritalli phalavallade,
aruhisidaḷu phalavilla.
Ahudembudu nīti, balle nōḍā,
kapilasid'dhamallikārjunā.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ