•  
  •  
  •  
  •  
Index   ವಚನ - 1862    Search  
 
ಆಕಾರವಿಲ್ಲದ ಮೂರ್ತಿಯ ಆಕಾರಕ್ಕೆ ತಂದು ಪೂಜಿಸಿದೆ ನೋಡಾ, ಮನವೆ. ಆಕಾರದ ಮೂರ್ತಿಯ ನಿರಾಕಾರಕ್ಕೆ ತಂದು ಪೂಜಿಸಲರಿಯೆ ನೋಡಾ, ಮನವೆ. `ಯದ್ದೃಷ್ಟಂ ತನ್ನಷ್ಟಂ' ಎಂದ ಬಳಿಕ, ನಿರಾಕಾರ ನಿಜನಿರ್ವಯಲವೆ ಸ್ಥಿರವೆಂದು ನಂಬು ಮನವೆ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.
Transliteration Ākāravillada mūrtiya ākārakke tandu pūje māḍide nōḍā, manave. Ākārada mūrtiya nirākārakke tandu pūjisalariye nōḍā, manave. `Yaddr̥ṣṭaṁ tannaṣṭaṁ' enda baḷika, nirākāra nijanirvayalave sthiravendu nambu manave, kapilasid'dhamallikārjunanalli.