Index   ವಚನ - 1903    Search  
 
ಕಾಲು ಮೇಲು ಮಾಡಿ, ಕೋಲು ಕೆಳಯಿಕೆ ಊರಿ, ಕಾಲಕಾಲ ತಪಶ್ಚರ್ಯ ಮಾಡಿದಡೆ ಕಾಲಾಂತಕ ನೋಡಾ. ದೇಶಕಾಲವಸ್ತುತ್ರಯವನರಿದಲ್ಲಿ, ಕಾಲಾರಿ ಕಾಲಕಾಲದಲ್ಲಿ ಕಾಲ್ದೊಡಕಾಗಿರುವ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.