•  
  •  
  •  
  •  
Index   ವಚನ - 1921    Search  
 
ಅಲಿಂಗಿಗಳ ಸಂಗ ಸಲ್ಲದೆಂದಡೆ, ಉದರದಲ್ಲಿಹ ಲಿಂಗ ಲಿಂಗವಲ್ಲವೆ, ಲಿಂಗಯ್ಯಾ? ಅಲಿಂಗಿಗಳ ಭೋಜನ ಸಲ್ಲದೆಂದಡೆ, ಪಶು ಪೃಥ್ವಿಗಳು ಅಂಗವಲ್ಲವೆ, ಲಿಂಗಯ್ಯಾ? `ಲಿಂಗಮಧ್ಯೇ ಜಗತ್ ಸರ್ವಂ' ಎಂದ ಬಳಿಕ ಲಿಂಗವಲ್ಲದೆ, ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗಯ್ಯಾ?
Transliteration Aliṅgigaḷa saṅga salladendaḍe, udaradalliha liṅga liṅgavallave, liṅgayya? Āliṅgigaḷa bhōjana salladendaḍe, paśu pr̥thvigaḷu aṅgavallave, liṅgayya? `Liṅgamadhyē jagat sarvaṁ' enda baḷika liṅgavallade, kapilasid'dhamallikārjuna liṅgayya?