ಅರುಹಿನ ಆಚರಣೆಯಿದು
ಕುರುಹಿನ ಕರುಮಾಡ ನೋಡಾ, ಲಿಂಗಯ್ಯಾ.
`ಕ್ರಿಯಾsಪಿ ಜ್ಞಾನೇನ ವರ್ತತೇ' ಎಂದ ಬಳಿಕ,
ಅರುಹು ಬೇಕು ಆಚರಣೆಯಲ್ಲಿ,
ಮರಹು ಬೇಕು ವಿಷಯಂಗಳಲ್ಲಿ.
ಈ ಅರುಹಿನ ಮರವೆಯ
ಶರಣನ ಕಂಡು ಕಣ್ದೆರಹುವ
ಕಪಿಲಸಿದ್ಧಮಲ್ಲಿಕಾರ್ಜುನನು.
Transliteration Aruhina ācaraṇeyidu
kuruhina karumāḍa nōḍā, liṅgayya.
`Kriyāspi jñānēna vartatē' enda baḷika,
aruhu bēku ācaraṇeyalli,
marahu bēku viṣayagaḷalli.
Ī aruhina maraveya
śaraṇana kaṇḍu kaṇderahuva
kapilasid'dhamallikārjunanu.