ಕಣ್ಣಿನ ಕಡೆಯ ಕಾಡಿಗೆಯನಿಕ್ಕಿದವಳ
ಅಣ್ಣನ ಕಣ್ಣಿನಲ್ಲಿ ಮೂರು ಕಣ್ಣಿ ಹುಟ್ಟಿದವು.
ಒಂದು ಕಣ್ಣಿ ಕುಂಭಕ್ಕೆ ಕುಣಿಕೆ.
ಒಂದು ಕಣ್ಣಿ ಎರಡರ ತಲಪು ಕೂಡಿದ ಕುಣಿಕೆ.
ಮತ್ತೊಂದು ಕಣ್ಣಿ ಕುಣಿಕೆಗೆ ಮೋಸ.
ಈ ಮೂರು ಕಣ್ಣಿಯ ಮುಪ್ಪುರಿಗೂಡಬೇಕು.
ಅವು ಹುರಿವಿಟ್ಟಂದ ಇವಾರಿಗೂ ಅಸಾಧ್ಯ,
ಬಂಕೇಶ್ವರಲಿಂಗವನರಿವವರಿಗಲ್ಲದಾಗದು.