Index   ವಚನ - 28    Search  
 
ಶೋಣಿತವ ಮುತ್ತಿದ ನೊಣನ, ಆ ಶೋಣಿತವೇ ತಿಂದಿತ್ತು. ಅಡಗ ತಿಂಬ ಕುಕ್ಕುರನ, ಆ ಅಡಗೇ ತಿಂದಿತ್ತು. ಇಷ್ಟವನರಿವ ಚಿತ್ತವನು, ಆ ಇಷ್ಟವೇ ತಿಂದಿತ್ತು. ಬಂಕೇಶ್ವರಲಿಂಗವನರಿವ ಮನವ, ಅದು ತಾನೆ ಅವಗವಿಸಿತ್ತು.