Index   ವಚನ - 38    Search  
 
ಎವೆಯ ಮುಚ್ಚಿ,ಕಣ್ಣು ತೆರೆಯಬೇಕು. ಶರೀರವ ಗೆದ್ದು, ಜ್ಞಾನವನರಿಯಬೇಕು. ಜ್ಞಾನವ ಮರೆದು, ವಿಜ್ಞಾನ ಸುಜ್ಞಾನದಲ್ಲಿ ನಿಂದು, ಚಿದ್ಘನದಲ್ಲಿ ಚಿಚ್ಛಕ್ತಿಯ ಕೂಡಿ, ಚಿಚ್ಛಕ್ತಿ ನಷ್ಟವಾಗಿ ವಸ್ತುಲೇಪ. ದೃಕ್ಕಿಂಗೆ ಅಗೋಚರವಾಗಿ, ತತ್ವಮಸಿಯೆಂಬ ಭಿತ್ತಿಯ ಭಾವವಿತ್ತಲೆ, ಅತ್ತಲರಿ, ಬಂಕೇಶ್ವರಲಿಂಗವ.