Index   ವಚನ - 67    Search  
 
ಅಸ್ಥಿ ಚರ್ಮವ ಪುದಿದ ಮರೆಯ ಹರಿಗೆಯೊಳು, ಅಸುಭಟನೆಂಬ ಬಂಟ, ದಶೇಂದ್ರಿಯನಪ್ಪ ಮಿಸುಗುವ ಕೂರಲಗಿನಲ್ಲಿ ನಿರ್ಗತಿಯೆಂಬ ಪ್ರಮಥನೊಳು ಕದನವನೆಸಗೆ, ಹುಸಿಕಾಯ ತೋರದ ಧನುವ ಜೇವಡೆಗೈದು, ನಿರ್ಧರ ದಿವ್ಯಪ್ರಣಮವೆಂಬ ಮೊನೆದೋರದ ಸರದಲ್ಲೆಸೆಯೆ, ಅಸ್ಥಿ ಚರ್ಮದ ಪ್ರಕೃತಿಯ ಅಂಗದ ನೇಮದ ಠಾವಿನಲ್ಲಿಬಿದ್ದುಕೊಂಡಿತ್ತು. ಅವನಸುವ ನಿರ್ವಾಣದ ಕೂರಲಗು ಅರಿ ಇದಿರಿಲ್ಲ. ಬಂಕೇಶ್ವರಲಿಂಗಕ್ಕೆ ಇದಿರಿಲ್ಲ.