ತನುಮಂಡಲ ರಣಮಯವಾಯಿತ್ತು.
ಕರಣಂಗಳ ಹಿಂಡು ಕೆದರಿತ್ತು.
ತನುಮಂಡಲದರಸು ಹಿಂದುಮುಂದಾದ ಚಂಡಿಕ,
ಚಂಡಿಕ ಪ್ರಚಂಡ ತಮಕೋದಂಡ ಮಾರ್ತಾಂಡಮಯ,
ಸ್ವಯಕುಲ ಚಕ್ರವರ್ತಿ ಗೆದ್ದ,
ಬಂಕೇಶ್ವರಲಿಂಗದೊಲುಮೆಯಿಂದ.
Art
Manuscript
Music
Courtesy:
Transliteration
Tanumaṇḍala raṇamayavāyittu.
Karaṇaṅgaḷa hiṇḍu kedarittu.
Tanumaṇḍaladarasu hindumundāda caṇḍika,
caṇḍika pracaṇḍa tamakōdaṇḍa mārtāṇḍamaya,
svayakula cakravarti gedda,
baṅkēśvaraliṅgadolumeyinda.
ಸ್ಥಲ -
ಸದ್ಭಾವಭಕ್ತಿವಿರಕ್ತಿಲೇಪಸ್ಥಲ: