ಭವಿಸಂಗವನೊಲ್ಲೆನೆಂದು,
ಭವಿಗಳ ಮನೆಯಲ್ಲಿ ಉಣ್ಣೆನೆಂದು,
ಭವಿಗಳಿಗೆ ಇಕ್ಕೆನೆಂದು,
ಭವಿಪಾಕದ ಕ್ಷಾರ ಕ್ರಮುಕ ಮಧುರ ತಿಲ ಚೂರ್ಣ
ಇವು ಮೊದಲಾದ ದ್ರವ್ಯಂಗಳ ಭಕ್ಷಿಸಿ,
ಪ್ರೇತರ ಕೂಟವನೊಲ್ಲೆನೆಂಬ,
ಜಗನೀತಿಯ ವರ್ತಕರುಗಳಿಗೆ ಅದೇತರ ಶೀಲ,
ಬಂಕೇಶ್ವರಲಿಂಗದಲ್ಲಿ?
Art
Manuscript
Music
Courtesy:
Transliteration
Bhavisaṅgavanollenendu,
bhavigaḷa maneyalli uṇṇenendu,
bhavigaḷige ikkenendu,
bhavipākada kṣāra kramuka madhura tila cūrṇa
ivu modalāda dravyaṅgaḷa bhakṣisi,
prētara kūṭavanollenemba,
jaganītiya vartakarugaḷige adētara śīla,
baṅkēśvaraliṅgadalli?
ಸ್ಥಲ -
ಅರಿವುಭಾವಸ್ಥಲಪೂರಿತ: