Index   ವಚನ - 91    Search  
 
ಮುಕ್ತ್ಯಾಂಗನೆಯ ಕೊಟ್ಟಿಗೆಯಲ್ಲಿ ಮೂರು ಎತ್ತು ಕಟ್ಟಿದವು. ಉಳುವುದಕ್ಕೆ ಹೆಗಲಿಲ್ಲ, ನಡೆವುದಕ್ಕೆ ಕಾಲಿಲ್ಲ, ಮೇವುದಕ್ಕೆ ಬಾಯಿಲ್ಲ, ಎರಡಾರಿಂಗೆ ಎಣೆಯಿಲ್ಲ. ಎತ್ತು ವಿಚ್ಛಂದವಾಯಿತ್ತು, ಎತ್ತು ಕಾವ ಹೈದ, ಎತ್ತ ಹೋದನೆಂದರಿಯೆ. ಕೊಟ್ಟಿಗೆ ಬಚ್ಚಬಯಲಾಯಿತ್ತು, ಬಂಕೇಶ್ವರಲಿಂಗಾ.