ಕಾಬುದು ಕ್ಷೀರವಾಗಿ ಕಂಡು, ನಿಂದುದು ದಧಿಯಾಗಿ,
ಉಂಟು ಇಲ್ಲಾ ಎಂಬುದು ಮಥನವಾಗಿ,
ನಿಂದುದು ನವನೀತವಾಯಿತ್ತು.
ಸಮ್ಯಜ್ಞಾನ ಜ್ಯೋತಿ ಘಟದಲ್ಲಿ ಕಾಸಿ,
ನಾ ನೀನೆಂಬುದನಳಿದು,
ಭಾವ ಶುದ್ಧವಾದಲ್ಲಿ ಘೃತವಾಯಿತ್ತು.
ಅಸಿ ತ್ವಂ ಪದ ತತ್ವವಾಯಿತ್ತು,
ಬಂಕೇಶ್ವರಲಿಂಗವ ಕೂಡಿದ ಕಾರಣ.
Art
Manuscript
Music
Courtesy:
Transliteration
Kābudu kṣīravāgi kaṇḍu, nindudu dadhiyāgi,
uṇṭu illā embudu mathanavāgi,
nindudu navanītavāyittu.
Samyajñāna jyōti ghaṭadalli kāsi,
nā nīnembudanaḷidu,
bhāva śud'dhavādalli ghr̥tavāyittu.
Asi tvaṁ pada tatvavāyittu,
baṅkēśvaraliṅgava kūḍida kāraṇa.
ಸ್ಥಲ -
ಕ್ರಿಯಾಸಂಬಂಧ ಲೇಪಸ್ಥಲ: