Index   ವಚನ - 102    Search  
 
ಅಡಿಗಡಿಗೆ ಬಂದಡರುತಿರ್ಪೆ. ಕಡುಛಲ ನಿನಗೆ ಬೇಡ ಕಂಡಾ! ಮೃಡನೆ, ಎನ್ನೊಡನೆ ನೀ ತೊಡರಿ ಸಸಿನೆ ಹೋಗಲಿರಯೆ. ಎಂತೆಂದಡೆ ನಾನಂಜುವನಲ್ಲ. ಸಂತತ ಘಾಸಿ ಮಾಡದೆ, ಕಂತುಹರ ಅಭಯಕರ, ಎನ್ನ ನೇಮಕ್ಕೆ ಅಡ್ಡ ಬರುತ್ತಿರದಿರು. ಒಡವೆ ಸವೆದರೊಡಲನೊಡ್ಡುವೆ. ಕಡಗುವಡೊಮ್ಮೆ ಹಳಚಿ ನೋಡು. ಬಡವನ ಕೈಯ ಕಡುಹ ನೋಡೆನ್ನೊಡೆಯ ಸಂಗಪ್ರಿಯ ಚೆನ್ನಬಂಕೇಶ್ವರಾ.