Index   ವಚನ - 101    Search  
 
ಕಣ್ಣು ನೀರ ನುಂಗಿದಂತೆ, ಬಣ್ಣ ಛಾಯವ ನುಂಗಿದಂತೆ, ಉರಿ ಸಾರವ ಕೊಂಡಂತೆ, ನಿರುತ ನಿರ್ವಾಣವಾದಂತೆ, ಸರಶಂಕೆಯ ಬಿಟ್ಟು, ಶರಧಿಯ ಒಡಗೂಡಿದಂತೆ, ತನುವಿನ ಸುಂಕವ ಮನೆದೆರಿಗೆಯ ಕರ್ತಂಗೆ ಒಪ್ಪಿಸಿದೆ. ಸಂದಿತ್ತು, ನೀವು ಕೊಟ್ಟ ಮಣಿಹವೆಂಬುದಕ್ಕೆ ಮುನ್ನವೆ ಬಯಲಾಯಿತ್ತು , ಬಂಕೇಶ್ವರಲಿಂಗದಲ್ಲಿ.