ಕೂರ್ಮನ ಶಿಶುವಿನ ಸ್ನೇಹದಂತಿರ್ಪ ದೇವನೆನಗಿಂದು
ಪ್ರತ್ಯಕ್ಷ ಕಣ್ಣ ಮುಂದೆ ಗೋಚರವಾದ ನೋಡಾ.
ಎನ್ನ ಅಂತರಂಗದಲ್ಲಿ ಹೂಣೆಹೊಕ್ಕು,
ವಿನಯ ಸದ್ಗೋಷ್ಠಿಯ ಮಾಡುವ
ನಿಷ್ಕಳಂಕ ಚೈತನ್ಯನು ಸಕಲರೂಪ ಸನ್ನಹಿತವಾದ ನೋಡಾ.
ಬಟ್ಟಬಯಲು ಬಲಿದು ಗಟ್ಟಿಗೊಂಡಂತೆ,
ಏಕಾಂತವೀರ ಸೊಡ್ಡಳಾ,
ನಿಮ್ಮ ಶರಣ ಪ್ರಭುದೇವರ ನಿಲವು.
Art
Manuscript
Music
Courtesy:
Transliteration
Kūrmana śiśuvina snēhadantirpa dēvanenagindu
pratyakṣa kaṇṇa munde gōcaravāda nōḍā.
Enna antaraṅgadalli hūṇehokku,
vinaya sadgōṣṭhiya māḍuva
niṣkaḷaṅka caitan'yanu sakalarūpa sannahitavāda nōḍā.
Baṭṭabayalu balidu gaṭṭigoṇḍante,
ēkāntavīra soḍḍaḷā,
nim'ma śaraṇa prabhudēvara nilavu.