ತಮ್ಮ ಪುತ್ರರಂಗದ ಮೇಲೆ,
ತಮ್ಮ ಶ್ರೀಗುರುವಿನ ಹಸ್ತದಲ್ಲಿ,
ಲಿಂಗಸಾಹಿತ್ಯವ ಮಾಡಿದ ಬಳಿಕ,
ಆ ಗುರುವಿನ ಪುತ್ರರಲ್ಲದೆ, ತಮ್ಮ ಪುತ್ರರಲ್ಲ.
ತಾವವರೂ ಗುರುವಿನ ಸೊಮ್ಮೆಂದರಿದು,
ಮತ್ತೆ ತಮ್ಮ ಪುತ್ರಿಯರೆಂದು ಮಾರಿಕೊಂಡುಂಡು,
ನಾನು ಭಕ್ತ, ನಾನು ಮಹೇಶ್ವರನೆಂಬ ಶಿವಾಚಾರ ಭ್ರಷ್ಟರುಗಳ
ವೀರಸೊಡ್ಡಳ ಮೆಚ್ಚುವನೆ, ಚನ್ನಬಸವಣ್ಣಾ ?