Index   ವಚನ - 98    Search  
 
ಸೃಷ್ಟಿಪಾಲಕ ಪ್ರತಿಕೂಲವಾದಡೆ, ಸಿಟ್ಟುಗುಟ್ಟಿ ಚಿವುಟನೆ ಬ್ರಹ್ಮನ ಶಿರವ? ಅವನಿಗೊಡೆಯ ನಾನೆಂದಡೆ, ಬಂಧನದಲ್ಲಿರಿಸನೆ ಬಂಟನಿಂದ ಬಲಿಯ? ಜಗವಂದ್ಯವಿರಹಿತನಾಗಿ, ಭೂಮಿಯನಳದು ಕೊಂಡಡೆ, ಕಾಲಬಿದ್ದು ಕಾಲಲ್ಲಿರಿಸನೆ ಹರಿಯೆ? ಹುಟ್ಟಿಸುವನಯ್ಯಾ, ಕುಸಕುಳಿಯೊಳಗೆ ದುರ್ಜೀವಿಗಳ ಮಾಡಿ. ಕತ್ತಿ ಕೌಚಿಯಲ್ಲಿ ಕುಸುರಿದರಸಿಕೊಂಡು, ಬಟ್ಟಬಯಲಲ್ಲಿ ಹೋದರು, ಸೃಷ್ಟಿಗೀಶ್ವರ ಕರ್ತ ಸೊಡ್ಡಳನನರಿಯದನ್ಯಾಯಿಗಳು.