Index   ವಚನ - 6    Search  
 
ಮಾತಾಪಿತರುಗಳಿಲ್ಲದ ಸಹೋದರ ಬಂಧುಗಳಿಲ್ಲದ, ಕುಲಗೋತ್ರಗಳಿಲ್ಲದ ಅಜಾತನು ನೀವು ಕಂಡಯ್ಯ. ಉಪಮಿಸಬಾರದ ಉಪಮಾತೀತನು, ನಿಮ್ಮ ಹೆಸರುಗೊಂಬವರಾರು ಇಲ್ಲ ಕಂಡಯ್ಯ. ಅಸಮಾಕ್ಷ ಅಪ್ರತಿಮ ಶಿವನೆ, ನೀವು ನೆನೆಯಲಾಗಿ, ನಾದಬಿಂದುಕಳೆಗಳಂಕುರಿತವಾದವು ಕಂಡಯ್ಯ. ನಿಮ್ಮ ಚಾರಿತ್ರ ನಿಮಗೆ ಸಹಜವಾಗಿದೆ, ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ.