ಗಂಡಿಂಗೆ ಹೆಣ್ಣುರೂಪಾಗಿ ಕಾಡಿತ್ತು ಮಾಯೆ.
ಹೆಣ್ಣಿಂಗೆ ಗಂಡುರೂಪಾಗಿ ಕಾಡಿತ್ತು ಮಾಯೆ.
ಆ ಹೆಣ್ಣು ಗಂಡಿಗೆ ಸುತರೂಪಾಗಿ ಕಾಡಿತ್ತು ಮಾಯೆ.
ಮಣ್ಣು ಹೆಣ್ಣು ಹೊನ್ನಾಗಿ ಕಾಡಿತ್ತು ಮಾಯೆ.
ಈ ತೂಳದ ಮೇಳದ ಜಗವನಾಳಿಗೊಂಡಿತ್ತು ಮಾಯೆ.
ಈ ಮಾಯೆ ಎಲ್ಲರ ಮೋಹಿಸಿ ಹಲ್ಲು ಕಿತ್ತು ತರಕಟ ಕಾಡಿತ್ತು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಶರಣರಲ್ಲದವರ ಹುಲ್ಲಿಂದ ಕಡೆ ಮಾಡಿತ್ತು ಮಾಯೆ.