ಬಡಕಲ ಪಶುವಿಂಗೆ ಬಲುದಂಡಿಯ ಕಟ್ಟಿದರೆ
ಎಳೆದೆಳೆದು ಸಾವಂತೆ,ಸಾವುತ್ತಿದೆ ನೋಡಾ.
ಅಜ್ಞಾನ ಜಡಜೀವರು ದೇಹವೆಂಬ
ದಂಡಿಯ ಕಟ್ಟಿಸಿಕೊಂಡು,
ಬಿಡಲುಪಾಯುವ ಕಾಣದೆ, ಹೊತ್ತು ತೊಳಲುತ್ತಿದ್ದರಲ್ಲ,
ಜನ್ಮಜನ್ಮಾಂತರದಲ್ಲಿ.
ಶಿವಭಕ್ತಿಯೆಂಬ ಸಜ್ಜನಿಕೆ ಬಂದರೀದೇಹವೆಂಬ
ದಂಡಿಯ ಬಿಡಿಸುವ[ನ]ಯ್ಯಾ,
ಕರುಣಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
Art
Manuscript
Music
Courtesy:
Transliteration
Baḍakala paśuviṅge baludaṇḍiya kaṭṭidare
eḷedeḷedu sāvante,
sāvuttide nōḍa.
Ajñāna jaḍajīvaru dēhavemba daṇḍiya kaṭṭisikoṇḍu,
biḍalupāyuva kāṇade, hottu toḷaluttiddaralla,
janmajanmāntaradalli.
Śivabhaktiyemba sajjanike bandarīdēhavemba
daṇḍiya biḍisuva[na]yyā,
karuṇi nijaguru svatantrasid'dhaliṅgēśvaranu.