Index   ವಚನ - 44    Search  
 
ದೇಹವೆಂಬ ಹುತ್ತಿನೊಳಗೆ, ನಿದ್ರೆಯೆಂಬ ಕಾಳೋರಗನೆದ್ದು ಕಡಿಯಲು ಮೂರ್ಛಿತರಾದರಯ್ಯ, ದೇವದಾನವ ಮಾನವರೊಳಗಾದೆಲ್ಲಾ ಜೀವರು. ಆವಾಗ ಬಂದು ಕಡಿದೀತೆಂದು ಕಾಣಬಾರದು. ದಿವಾ ರಾತ್ರಿಯೆನ್ನದೆ ಬಂದು ಕಡಿಯಲೊಡನೆ ವಿಷ ಹತ್ತಿ ಸತ್ತವರಿಗೆಣೆಯೆಂಬಂತೆ ಜೀವನ್ಮೃತರಾದರಯ್ಯ. ಶಿವಜ್ಞಾನವೆಂಬ ನಿರ್ವಿಷವ ಕಾಣದೆ ನಿದ್ರಾಸರ್ಪನ ಬಾಯಿಗೀಡಾದರು ಕಾಣಾ, ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ.