ಮರಹೆಂಬ ಕತ್ತಲೆಯೊಳಗೆ ತ್ರಿಜಗದ ಪ್ರಾಣಿಗಳೆಲ್ಲ
ಹಿಂದುಗಾಣದೆ ಮುಂದುಗಾಣದೆ ಗೊಂದಣಗೊಳುತ್ತಿರ್ದರಲ್ಲ.
ತಂದಿಕ್ಕಿದೆ ಬಲು ಮರವೆಯ ಶಿವನೇ, ನಿನ್ನ ಕಾಣದಂತೆ.
ಈ ಅಂಧಕಾರದಲ್ಲಿರ್ದ ಪ್ರಾಣಿಗಳಿಗಿನ್ನೆಂದಿಂಗೆ
ಮುಕ್ತಿಯಹುದೊ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?.
Art
Manuscript
Music
Courtesy:
Transliteration
Marahemba kattaleyoḷage trijagada prāṇigaḷella
hindugāṇade mundugāṇade gondaṇagoḷḷuttirdaralla.
Tandikkide balu maraveya śivanē, ninna kāṇadante.
Ī andhakāradallirda prāṇigaḷiginnendiṅge
muktiyahudo, nijaguru svatantrasid'dhaliṅgēśvara?.