Index   ವಚನ - 59    Search  
 
ತಟಿದಂಕುರದಂತೆ ಕ್ಷಣದಲ್ಲಿ ತೋರಿಯಡಗುವ ಸಂಸಾರ. ಇದರಲ್ಲೇನು ಲೇಸ ಕಂಡು, ನಿತ್ಯಾನಂದ ಚಿದಾತ್ಮಸುಖವ ಬಿಡುವೆ? ಈ ಸಂಸಾರ ಸ್ಥಿರವಲ್ಲ. ಬೇಗ ಗುರು ಚರಣವ ದೃಢವಿಡಿ. ಕಾಬೆ, ಮುಂದೆ ನೀನು ಕೈವಲ್ಯವ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಾಹ ಸೌಖ್ಯವನು.