Index   ವಚನ - 89    Search  
 
ಆಚಾರವೆ ಭಕ್ತಂಗೆ ಅಲಂಕಾರವು. ಆಚಾರವೆ ಭಕ್ತಂಗೆ ಸರ್ವಪೂಜ್ಯವು. ಇಂತೀ ಆಚಾರವುಳ್ಳವನೆ ಭಕ್ತನು. ಆಚಾರವುಳ್ಳವನೆ ಯುಕ್ತನು. ಆಚಾರವುಳ್ಳವನೆ ಮುಕ್ತನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.