Index   ವಚನ - 99    Search  
 
ಗುರುವನರಿದು ಗುರುಭಕ್ತಿಯ ಮಾಡಿ, ಲಿಂಗವನರಿದು ಲಿಂಗಭಕ್ತಿಯ ಮಾಡಿ, ಜಂಗಮವನರಿದು ಜಂಗಮಭಕ್ತಿಯ ಮಾಡಿ, ತ್ರಿವಿಧವನು ಒಂದೆಂದು ಕಂಡು, ತ್ರಿವಿಧ ಭಕ್ತಿಸಂಪನ್ನರಾದವರ ಭಕ್ತರೆಂಬೆನು, ಅಲ್ಲದವರ ಉದರ ಪೋಷಕರೆಂಬೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.